ನೂರೊಂದು ನೆನಪು
ಬಂಧನ ಆರ್. ಎನ್. ಜಯಗೋಪಾಲ್
ಎಂ. ರಂಗರಾವ್
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ || ಪ ||
ಒಲವೆಂಬ ಲತೆಯು ತಂದಂಥ ಹೂವು
ಮುಡಿ ಏರೆ ನಲಿವು ಮುಡಿ ಜಾರೆ ನೋವು
ಕೈಗೂಡಿದಾಗ ಕಂಡಂಥ ಕನಸು
ಅದೃಷ್ಟದಾಟ ತಂದಂಥ ಸೊಗಸು
ಪ್ರೀತಿ ನಗಿತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೇಕು ಸಂತೋಷದಿಂದ || ೧ ||
ತುಟಿ ಮೇಲೆ ಬಂದಂಥ ಮಾತೊಂದೆ ಒಂದು
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷ ಉಂಟು
ನಿನ್ನ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದ || ೨ ||
ಬಂಧನ
ಚಿತ್ರ ನೋಡಿ